ಬ್ಯುಸಿಯಾಗಿರುವ ಪತಿ-ಪತ್ನಿಗೆ ಕಾಡುವ ಒಂಟಿತನವು ಸಂಸಾರಕ್ಕೆ ಒಳ್ಳೆಯದಲ್ಲ.

ಈಗೀನ ಬಹುತೇಕ ಕುಟುಂಬದ ಸಮಸ್ಯೆಯೆಂದರೆ ಸಂಗಾತಿ ಸಮಯ ಕೊಡುತ್ತಿಲ್ಲ ಎಂಬುವುದಾಗಿದೆ. ಅದು ಪ್ರೀತಿಸಿ ಮದುವೆಯಾಗಿರಲಿ ಅಥವಾ ಅರೇಂಜ್ ಮದುವೆಯಾಗಿರಲಿ ಸಂಗಾತಿ ಸಮಯ ಕೊಡದಿದ್ದರೆ ಒಂಟಿತನ ಕಾಡಲಾರಂಭಿಸುತ್ತದೆ. ಈ ಸಮಸ್ಯೆ ಹೆಚ್ಚಾಗಿ ಗೃಹಿಣಿಯರಿಗೆ ಕಾಡುತ್ತದೆ.

ಮನೆಯಲ್ಲಿಯೇ ಇದ್ದು ಸಂಜೆ ಗಂಡ ಬಂದಾಗ ಸ್ವಲ್ಪ ಮಾತನಾಡೋಣ ಎಂದು ಆಸೆಯಿಂದ ಕಾಯುತ್ತಿರುತ್ತಾರೆ, ಆದರೆ ಮನೆಗೆ ಬಂದ ಗಂಡ ಮೊಬೈಲ್, ಟಿವಿ ಅಂತ ಬ್ಯುಸಿ ಅಂತ ಇದ್ದರೆ ಅಥವಾ ಫ್ರೆಂಡ್ಸ್ಗಳ ಜೊತೆ ಸಮಯ ಕಳೆದು ಮನೆಗೆ ಬರುತ್ತಾರೆ, ಬೆಳಗ್ಗೆ ಸಂಜೆಯವರಿಗೆ ಮನೆಯಲ್ಲಿಯೇ ಇದ್ದ ಹೆಂಡತಿಗೆ ಗಂಡನ ಈ ವರ್ತನೆಯಿಂದ ತುಂಬಾನೇ ಒಂಟಿತನ ಕಾಡುವುದು. ಅದು ಯಾವುದು ಅಂತ ಒಮ್ಮೆ ಓದಿ.

ಕುಟುಂಬದಲ್ಲಿ ಸಮಸ್ಯೆ ಬರಲಾರಂಭಿಸುತ್ತದೆ: 
ಯಾವಾಗ ಪತ್ನಿಗೆ ಒಂಟಿತನ ಕಾಡಲಾರಂಭಿಸುತ್ತದೋ ಅವರಿಗೆ ಒಂದು ರೀತಿಯ ಅಸಮಧಾನ ಉಂಟಾಗುತ್ತದೆ, ಇದರಿಂದಾಗಿ ಕುಟುಂಬದಲ್ಲಿ ಸಮಸ್ಯೆ ಉಂಟಾಗುವುದು. ಅವರು ತಮ್ಮ ಬೇಸರವನ್ನು ಅಸಮಧಾನದ ಮೂಲಕ ಹೊರ ಹಾಕುತ್ತಾರೆ, ಇದರಿಂದ ಗಂಡನಿಗೆ ಕಿರಿಕಿರಿ ಉಂಟಾಗುತ್ತದೆ, ಇಬ್ಬರ ನಡುವೆ ವಾಗ್ವಾದ ಉಂಟಾಗುತ್ತದೆ, ಇದರಿಂದ ಸಮಸ್ಯೆ ಉಂಟಾಗುವುದು.

ಇಲ್ಲ ಖಿನ್ನತೆ ಕಾಡುತ್ತದೆ:
ಅವಳು ತನ್ನ ಕೋಪ, ಅಸಮಧಾನವನ್ನು ವ್ಯಕ್ತಪಡಿಸುವವಳು ಆದರೆ ಸರಿ, ಆದರೆ ಕೆಲವರು ಮನಸ್ಸಿನಲ್ಲಿಯೇ ಕೊರಗುತ್ತಾರೆ, ಇದರಿಂದಾಗಿ ಅವರಿಗೆ ತೀವ್ರ ಒಂಟಿತನ ಖಿನ್ನತೆಯಾಗಿ ಕಾಡುವುದು. 

ಬೇರೆ ಕಡೆ ಆಕರ್ಷಣೆ ಉಂಟಾಗುವುದು:
ಕೆಲವೊಮ್ಮೆ ಈ ಸಂವಹನದ ಕೊರತೆ, ಗಂಡ ಹೆಂಡತಿಗೆ ಕಡೆಗೆ ಗಮನ ನೀಡದಿರುವುದು ಈ ಬಗೆಯ ವರ್ತನೆಯಿಂದಾಗಿ ಅವರು ತುಂಬಾ ನೊಂದುಕೊಂಡಿರುತ್ತಾರೆ. ಈ ಸಮಯದಲ್ಲಿ ಯಾರಾದರೂ ಅವರ ಬಗ್ಗೆ ಸ್ವಲ್ಪ ಕಾಳಜಿ ತೋರಿಸಿದರೆ ಸಾಕು ಅದೇ ಆಕರ್ಷಣೆಯಾಗುವುದು. ಆ ವ್ಯಕ್ತಿ ಗಂಡನಿಗಿಂತ ಹತ್ತಿರದವನಾಗುತ್ತಾನೆ.

ಆದ್ದರಿಂದ ಪುರುಷರೇ ಹೆಂಡತಿಗೆ ಸಮಯ ಕೊಡಿ:
ನೀವು ಎಷ್ಟೇ ಬ್ಯುಸಿ ಇರಲಿ ಆದರೆ ನಿಮ್ಮ ಪತ್ನಿಯನ್ನು ಕರೆ ಮಾಡಿ ಮಾತನಾಡಿಸಿ, ಮನೆಗೆ ಬಂದಾಗ ಅವರ ಜೊತೆ ಆ ದಿನದ ಘಟನೆಗಳನ್ನು ಹಂಚಿಕೊಳ್ಳಿ, ಅವಳು ಹೇಳುವ ಮಾತುಗಳನ್ನು ಸಮಧಾನದಿಂದ ಕೇಳಿ, ಅದು ಅವಳಿಗೆ ಖುಷಿ ಕೊಡುತ್ತದೆ, ನೀವು ತುಂಬಾ ಬ್ಯುಸಿ ಅಂತ ಅವರಿಗೂ ಗೊತ್ತಿರುತ್ತದೆ, ಆದರೆ ಅವರನ್ನು ನಿರ್ಲಕ್ಷ್ಯ ಮಾಡಬಾರದು ಎಂಬುವುದನ್ನು ಮರೆಯದಿರಿ. 

ನಮ್ಮವರನ್ನು ತುಂಬಾ ಪ್ರೀತಿಸುತ್ತಿದ್ದರೆ ಅವರಿಗೆ ಕೊಡಲು ಖಂಡಿತ ಸಮಯವಿರುತ್ತದೆ:
ಕೊಹ್ಲಿಯನ್ನು ನೋಡಿ, ಕ್ರಿಕೆಟ್ ಕ್ರೀಡಾಂಗಣದಲ್ಲಿಯೇ ನಿಂತು ಮಗಳ ಜೊತೆ ವೀಡಿಯೋ ಕಾಲ್ ಮಾಡುತ್ತಿದ್ದರು, ಹೌದು ನಾವು ದುಡಿಯುವುದೇ ನಮ್ಮವರಿಗಾಗಿ ಅಂಥದ್ದರಲ್ಲಿ ಅವರಿಗಾಗಿ ಸಮಯ ಕೊಡದಿದ್ದರೆ ಹೇಗೆ? ಆದ್ದರಿಂದ ಸಂಗಾತಿ ಹೌಸ್ ಆಗಿದ್ದರೆ ನಿನಗೇನು ಸುಮ್ಮನೆ ಮನೆಯಲ್ಲಿ ಕೂರುವುದು ಎಂದು ಮೂದಲಿಸುವ ಬದಲಿಗೆ ಅವರ ಭಾವನೆಗಳಿಗೆ ಸ್ಪಂದಿಸಿ.

ಹೌದು ಈ ಮಾತನ್ನು ತುಂಬಾ ಜನ ಪುರುಷರು ತಮ್ಮ ಪತ್ನಿ ಬಳಿ ಹೇಳುತ್ತಾರೆ, ಆದರೆ ಅವರಿಗೆ ನೀವು ಕೊಡಿಸುವ ವಸ್ತುಗಳು ಅವರಿಗೆ ಮುಖ್ಯವಾಗಿರಲ್ಲ. ನೀವು ಕೊಡುವ ಪ್ರೀತಿ ತುಂಬಾನೇ ಮುಖ್ಯ. ನೀವು ಚಿನ್ನ ಕೊಡಿಸಿ, ಕಾರು ಕೊಡಿಸಿ ಅವರಿಗೆ ಆ ಕ್ಷಣವಷ್ಟೇ ಖುಷಿ ಪಡುತ್ತಾರೆ, ಆದರೆ ಅಷ್ಟೆಲ್ಲಾ ಕೊಡಿಸಿ ನಿಮಗೆ ಅವರ ಜೊತೆ ಮಾತನಾಡಲು, ಅವರ ಭಾವನೆಗಳಿಗೆ ಸ್ಪಂದಿಸದಿದ್ದರೆ ತುಂಬಾನೇ ಒಂಟಿತನ ಅನುಭವಿಸುತ್ತಾರೆ. ಆದ್ದರಿಂದ ಈ ಬಗ್ಗೆ ಪುರುಷರೇ ನೀವು ಗಮನಹರಿಸಿ, ನಿಮ್ಮ ಪತ್ನಿಗೆ ಒಂಟಿತನ ಕಾಡದಂತೆ ನೋಡಿಕೊಳ್ಳಿ, ನಿಮ್ಮಿಬ್ಬರ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ.